Saturday, October 25, 2008

ಸೃಷ್ಟಿಕರ್ತ

ಸದಾ ಉತ್ಸವ ಜಗದೊಳಗೆ-
ಉಳುವ, ಬಿತ್ತುವ, ಟಿಸಿಲೊಡೆಯುವ
ಹೂವಾಗುವ, ಕಾಯಿಯಾಗುವ, ಮಾಗುವ ಸಂಭ್ರಮ ಪ್ರಕೃತಿಗೆ!
ಹಸಿರು ತೋರಣ, ಋತುಗಳ ಮೆರವಣಿಗೆ,
ಬಣ್ಣಗಳ ಚೆಲ್ಲಾಟ, ಹಕ್ಕಿಗಳ ಕಲರವ, ಗಾಳಿಯ ನಿನಾದ,
ಸೂರ್ಯನ ಬಿಸಿ, ಚಂದಿರನ ತಂಪು
ಹೇಗೆ ಸೃಷ್ಟಿಸಿದೆ ಇವನ್ನೆಲ್ಲ?

ಭಾಗಳ ರಂಗು ಹೃದಯದ ಒಸರಲ್ಲಿ
ಹೊಂಬಣ್ಣದ ತೆನೆ ಹಸಿರಿನ ಬಸಿರಲ್ಲಿ
ಬಣ್ಣಗಳ ಮೇಳ ಹಸಿರಿನ ಉಸಿರಲ್ಲಿ.
ಧರಿತ್ರಿಗೆ ಕಿರೀಟಗಳು ಹಿಮಚ್ಛಾದಿತ  ಪರ್ವತಶ್ರೇಣಿಗಳು
ಏರೆದೆಗೆ ಪೀಠಗಳು ಗುಡ್ಡಬೆಟ್ಟಗಳು
ಜೀವಚರಗಳಿಗೆ ಜೀವಸೆಲೆ ಜಲಪಾತ, ಝರಿಗಳು.
ಜೀವ ಜಲಕೆ ಒಸರು ನದಿ,ಕೆರೆ ಸರೋವರಗಳು!
ಹೇಗೆ ಸೃಷ್ಟಿಸಿದೆ ಇವನ್ನೆಲ್ಲ?

ಪೃಥ್ವಿಯ ಜೊತೆಗೆ ಸಾಗರವನ್ನಿಟ್ಟೆ
ಕಂಬಗಳಿಲ್ಲದೆ ಬಾನಿನ ಚಪ್ಪರ ಹಾಕಿಯೇ ಬಿಟ್ಟೆ
ಭೂಮಿಯ ಮೇಲೆ ಪಶು ಪಕ್ಷಿ ಪ್ರಾಣಿಗಳ ಓಡಾಡಬಿಟ್ಟೆ
ಮನುಜರ ಸೃಷ್ಟಿಸಿ ಭಾವಗಳ ರಂಗನು ತುಂಬಿಆಳಲು ಬಿಟ್ಟೆ;
ಸಾಗರದೊಳಗೆ ಬಣ್ಣಬಣ್ಣದ  ಜಲಚರಗಳ ತೇಲಿಸಿಬಿಟ್ಟೆ
ಪುಟ್ಟಪುಟ್ಟ ಚಿಟ್ಟೆಗಳ ಬಣ್ಣದಲ್ಲದ್ದಿ ಮೆರೆಯಲು ಬಿಟ್ಟೆ;
ಎಲ್ಲವೂ ನಿನ್ನಯ ಸೃಷ್ಟಿ, ಆದರೂ ಬೇರೆ ಬೇರೆ
ಒಂದರ ಹಾಗೆ ಇನ್ನೊಂದಿಲ್ಲ. ಒಂದರ ಬಣ್ಣ ಇನ್ನೊಂದಕ್ಕಿಲ್ಲ.
ಎಲ್ಲಿಂದ ತಂದೆ ಇಷ್ಟೊಂದು ವೈವಿಧ್ಯತೆ?

ಹೆಣ್ಣಿನ ಜೊತೆಗೆ ಗಂಡನ್ನಿಟ್ಟೆ
ಭಾವಗಳ ಓಟಕೆ ರಂಗನು ಎರೆದೆ.
ಕಾಮದ ಬೆಂಕಿಯ ಹಚ್ಚಿ ಹೊಸಹುಟ್ಟಿಗೆ ಇಂಬನ್ನಿತ್ತೆ.
ಪ್ರೀತಿಪಾಠದ ಅಕ್ಕರಿಗ ನೀನು
ಪ್ರೀತಿಯೇ ಜಗದ ಉಸಿರೆಂದೆ.
ಆದರೂ ಪ್ರೀತಿಯ ಜೊತೆಗೆ ದ್ವೇಷವನ್ನಿಟ್ಟೆ;
ಸುಖದ ಜೊತೆಗೆ ದುಖಃವನ್ನಿಟ್ಟೆ
ಯಾಕೆ ಹೀಗೆ ಮಾಡಿದೆ?

ಹಗಲಿನಾಗಸದಲಿ ನೇಸರ ಹೊಂಬಿಸಿಲು
ಇರುಳಿನಾಕಾಶದಲಿ ಶಶಿಯ ತಂಬೆಳಕು;
ಅಂಬರದಂಗಳದಲಿ ನಕ್ಷತ್ರಗಳ ಹೊಳಪು
ಮರಗಳ ತುಂಬ ಮಿಂಚುಳ್ಳಿ ಮಿಣುಕು;
ಮೋಡಗಳ ನಡುವೆ ಮಿಂಚಿನ ಝಳಪು;
ಬೆಳಕಿಗೆಂದೂ ಬರವಿಲ್ಲ,
ಆದರೆ ಮನಮನದೊಳಗೊಂದೊಂದು
ನಕ್ಷತ್ರವನ್ನಿಡಲು ಏಕೆ ಮರೆತೆ?

ಭೂಮಿಯ ಸಹನೆ, ಅಲೆಗಳ ಚಂಚಲತೆ
ಗಾಳಿಯ ಚೈತನ್ಯ, ಆಗಸದ ಐಕ್ಯತೆ
ಎಲ್ಲವೂ ಕಲಿಕೆಯ ಆಗರ. ಎಲ್ಲದಕ್ಕೂ ನೀನೆ ಗುರು
ಎಲ್ಲರೂ ನಿನ್ನ ಕೈಯಲ್ಲಿ ಅಕ್ಷ,
ನೀ ಹೇಳಿದಂತೆ ಇಡೀ ಜಗ.
ಆದರೂ ಮುತ್ತಿದೆ ದ್ವೇಷದ ಹಗೆ, ನೋವಿನ ಧಗೆ
ಶಾಂತಿಯ ಏಕೆ ತುಟ್ಟಿಯಾಗಿಸಿದೆ?

ನಿನ್ನಯ ಬಣ್ಣದ ಬಾಂಡಲಿ ಅಕ್ಷಯ!
ರಂಗಿಗೆ ಬರವಿಲ್ಲ, ರಾಗಕೆ ಮೌನವಿಲ್ಲ
ನೀ ಬರೆವ ಚಿತ್ರಗಳಿಗೆ ಕೊನೆಯಿಲ್ಲ
ಇಡೀ ಬ್ರಹ್ಮಾಂಡವೇ ನಿನ್ನ ಕ್ಯಾನ್ವಾಸ್;
ಎಲ್ಲವೂ ಅಗಾಧ, ಅಕಲಂಕ, ಅಕೃತ್ರಿಮ.
ಕಣ್ಣಿಗೆ ಕಾಣದ ಚಿತ್ರಿಕ ನೀನು;
ನಿನ್ನೊಲವು ಅಕ್ಷೀಣ. ನಿನ್ನ ಅಣತಿಗೆ ನಮ್ಮ ಸವಾಲಿಲ್ಲ.
ಎಲ್ಲವ ಹೊತ್ತ ಅಗಧರ ನೀನು. ನಿನಗೆ ನೀನೇ ಸವಾಲು.
ಎಲ್ಲಿರುವೆ ನೀನು ಹೇಗಿರುವೆ?I Salute YOU


Ever festive, always creative
Sowing, sprouting, flowering and bearing fruits
Nature is full of life every moment you blink!
Seasons change –
Burning heat, withering greens
Rains pour wetting the land, greens sprout
Flowers bloom sending fragrance with the breeze.
Nothing stops nature's motherhood!

Chill of the winter, Chirps of birds,
Melody of wind, warmth of sun
Soothing moonlight, everything in abundance
How did you create all these?

Golden sproutings from the woumb of green
Sprinkle of colours everywhere on earth!
Ice clad moutains as the crown to the nature queen
Hills and valleys as the cradles for angels
Waterfalls, rivers and ponds to quench the thirst-
How did you create all these?

You kept the motherland in the midst of deep seas
Spread the roof of star studded blue sky without any pillars
Created animals and birds to enjoy nature
Comely fish to add brightness into the scary depth!
Painted butterflies in variety of colours
Sent them to suck honey from flowers!
Created human beings and sent them to rule.
All are your creations but nothing resembles the other!
How did you create varieties?

Kept Eve with Adam
Filled their heart with lot of feelings and desires;
Emotions overflow from the depth of the heart
Brought them together with the power of love,
Encouraged procreation. Filled the world with siblings
You are the creator. You said love rules the world!
But added a drop of hatredness in everyone's blood
Why did you do this?

Sunlight in the day, moonlight at night
Twinkling stars in the sky
Lines of lightening in the midst of clouds
You have so much light to spare
But how you forgot to keep a star in every heart
You sent to this dark world?

Patience of the land, vastness of the the sky
Fickleness of the water, fastness of the wind
Nature is always a teacher, You are the dictator!
And we are the pawns dancing to your tunes.
But why enemity and pain everywhere
Why scarcity of peace in this world?

Your creations are the best and the most beautiful
Full of colours, full of emotions and songs
Everything in abundance!
Entire Universe is your canvas!
so vast, so deep and so clear!
You are nowhere though we feel you everywhere
You are the beholder you carry the universe.
But how are you and where are you?

Oh God
You are the creator
You are the mentor
You are the destoyer
I salute you for whatever you are!
Take me with you In the correct path
Whatever I do!No comments: