ಬ್ರಹ್ಮಕಮಲ
ಕೇವಲ ಹತ್ತು ಹನ್ನೆರಡು ಗಂಟೆಗಳ ಆಯಸ್ಸು ಈ ಹೂವಿಗೆ.
ಮೊಗ್ಗು ಮೂಡಲು ದಿನಗಟ್ಟಳೆ ತೆಗೆದುಕೊಳ್ಳುತ್ತದೆ. ಆದರೆ
ರಾತ್ರಿ ೮-೯ ರಷ್ಟಕ್ಕೆ ಅರಳಲು ಸುರುಮಾಡುತ್ತದೆ ಮಧ್ಯರಾತ್ರಿ
ಸಂಪೂರ್ಣ ಅರಳುತ್ತದೆ. ೩ ಗಂಟೆಯಾಗುವಾಗ ಬಾಡಲು
ಸುರುವಾಗುತ್ತದೆ. ಬೆಳಗ್ಗೆ ೬-೭ ಗಂಟೆಗೆ ಸಂಪೂರ್ಣ ಬಾಡುತ್ತದೆ.
ಅದು ಅರಳುವುದನ್ನು ನೋಡುವುದೇ ಸಂತಸ ನೀಡುವ ಕ್ಷಣಗಳು.
ಅದರ ಚಂದ, ಅಚ್ಚ ಬಿಳುಪು ಬಣ್ಣ ಅದು ಹೊರಸೂಸುವ ಪರಿಮಳ
ಅದರ ಜೊತೆಗೆ ಕುಳಿತು ಅದನ್ನು ನೋಡುತ್ತ ಅನುಭವಿಸಬೇಕಷ್ಟೇ.
ವಿವರಿಸಲಾಗದು.
ಆದರೆ ರಾತ್ರಿ ನಿದ್ದೆಗೆಟ್ಟು ಎಷ್ಟು ಜನ ಈ ಸಂತಸವನ್ನು ಅನುಭವಿಸುತ್ತಾರೆ?
Brahmakamala is a very rare flower with a very
short life. It takes days to form a bud. One fine
day it starts blooming by about 8-9 pm and at
midnight it is fully bloomed. But by 3 am it starts
closing. By 6-7 am it is gone.It is really a heavenly
pleasure to watch it bloom.The beauty, pure
white color with a maddening light smell can not be
explained in words. We have to sit with it and watch.
But who has time to sit and watch in the night?
ಬಿಡುವು
ಜೀವನದಲ್ಲೇನಿದೆ ಎಲ್ಲಾ ಇದ್ದೂ
ಒಂದು ಕ್ಷಣ ಮೈಮರೆತು ನಿಂತು
ಕಣ್ಣೆಟಕುವಷ್ಟು ದೂರದವರೆಗೆ
ದೃಷ್ಟಿ ಹಾಯಿಸಲು ಬಿಡುವಿಲ್ಲದ ಮೇಲೆ?
ಹಸಿರುಹೊದ್ದ ಮರದ ನೆರಳಲಿ ನಿಂತು
ದನಕರು, ಕುರಿಮಂದೆ ಮೇಯುತ್ತಿರುವಷ್ಟು
ದೂರದವರೆಗೆ ಕಣ್ಣು ಹಿಗ್ಗಿಸಿ
ನೋಡಲು ಬಿಡುವಿಲ್ಲದ ಮೇಲೆ?
ದಟ್ಟಡವಿಯಲಿ ಹಾದು ಹೋಗುವಾಗ
ಹಣ್ಣಾಗಿ ಉದುರಿದ್ದ ಬೀಜಗಳ ಹೆಕ್ಕಿ ಹುಲ್ಲಿನ ಪೊದೆಗಳಲ್ಲಿ
ಅಡಗಿಸಿಡುವ ಅಳಿಲಿನ ತುಂಟಾಟವ ನೋಡಿ
ನಗಲು ಬಿಡುವಿಲ್ಲದ ಮೇಲೆ?
ನಕ್ಷತ್ರಗಳು ಫಳಫಳಿಸುವ ರಾತ್ರಿಯಾಕಾಶವನ್ನು ನೆನಪಿಸುವಂತೆ
ಜುಳುಜುಳು ಹರಿವ ನೀರಲ್ಲಿ ರವಿಕಿರಣ ಪ್ರತಿಫಲಿಸಿ
ಮಟಮಟ ಮಧ್ಯಾಹ್ನದಲಿ ನಕ್ಷತ್ರಗಳ ಹಿಂಡನ್ನೇ ಸೃಷ್ಟಿಸಿರುವ
ಅಂದವ ನೋಡಿ ಆನಂದಿಸಲು ಬಿಡುವಿಲ್ಲದ ಮೇಲೆ?
ಬಿಡುವಿಲ್ಲ, ನಮಗೆ ಯಾವುದಕ್ಕೂ ಬಿಡುವಿಲ್ಲ
ಪ್ರಕೃತಿದೇವಿ ಸೌಂದರ್ಯ ಸ್ಪರ್ಧೆಯಲಿ ಪಂಥಕಟ್ಟಿ
ನಲಿಯುವುದ ನೋಡಲು; ಅವಳ ಕಣ್ಣಲ್ಲಿ ಮಿಂಚಿದ ನಗು
ಹೂವಾಗಿ ಗಿಡಗಳಲ್ಲಿ ಬಿರಿಯುವುದ ನೋಡಲು ಬಿಡುವಿಲ್ಲ.
ಎಲ್ಲಾ ಇದ್ದರೂ ಒಂದು ಕ್ಷಣ ಮೈಮರೆತು ನಿಂತು
ಕಣ್ಣೆಟಕುವಷ್ಟು ದೂರದವರೆಗೆ ದೃಷ್ಟಿ ಹಾಯಿಸಲು ನಮಗೆ ಬಿಡುವಿಲ್ಲ.
ಯಾವುದಕ್ಕೂ ಬಿಡುವಿಲ್ಲದ ಜೀವನಕ್ಕೇನರ್ಥ?
ಅದು ಏನೂ ಇಲ್ಲದ ಬರಡು ಭೂಮಿ!
(ಸರ್ ವಿಲಿಯಮ್ ಹೆನ್ರಿ ಡೇವಿಸ್ ಅವರ ’ ಲೀಜರ್’ಕವನದಿಂದ ಪ್ರೇರಿತ)
We have no time to stand and stare
The squirrels playing in the woods,
The stars falling down from the sky;
Showers of rain drenching the trees!

Music of the Breeze!
We have no time to stand and stare
The squirrels playing in the woods,
The stars falling down from the sky;
Showers of rain drenching the trees!
We have no time to put our steps
With the dancing grass in the grandfather's field
Walk along the banks of the river counting fish!
And enjoy the music of the breeze!
We are busy in raising our status
We have no time to listen to our heart beats
Which always sing the songs of life!
We forget to live the life we love to live!
This is the tragedy, we are always busy
No time for the little things we love to do
We live a life tailor made for us
And forget to live and smile at the silver linings
Peeping through the clouds!
We are ever busy, always on our heels
Every moment tensed; no time is left for ourselves.
Is there any meaning to such life?
No we are lost for ever!